Back to Languages

Kannada - Chapter 6 - Al-Anam

Translation by Abdussalam Puthige — Permalink

Verse 18 — Surah Al-Anam 6:18

(ದೂತರೇ) ‘‘ಯಾರ ಸಾಕ್ಷವು ಹೆಚ್ಚು ದೊಡ್ಡದು?’’ ಎಂದು ಕೇಳಿರಿ (ಮತ್ತು) ಹೇಳಿರಿ; ‘‘ಅಲ್ಲಾಹನದು. ನನ್ನ ಹಾಗೂ ನಿಮ್ಮ ನಡುವೆ ಅವನೇ ಸಾಕ್ಷಿ. ಈ ಕುರ್‌ಆನ್‌ನ ಮೂಲಕ ನಾನು ನಿಮ್ಮನ್ನು ಹಾಗೂ ಇದು ಯಾರಿಗೆಲ್ಲಾ ತಲುಪುವುದೋ ಅವರೆಲ್ಲರನ್ನೂ ಎಚ್ಚರಿಸಬೇಕೆಂದು ಇದನ್ನು ನನಗೆ ದಿವ್ಯ ಸಂದೇಶವಾಗಿ ನೀಡಲಾಗಿದೆ. ಅಲ್ಲಾಹನ ಜೊತೆ ಬೇರೆ ದೇವರಿದ್ದಾರೆಂದು ನೀವೇನು ಸಾಕ್ಷಿ ಹೇಳಬಲ್ಲಿರಾ?’’ ಹೇಳಿರಿ; ‘‘ನಾನಂತು (ಆ ರೀತಿ) ಸಾಕ್ಷಿ ಹೇಳಲಾರೆ.’’ ಹೇಳಿರಿ; ‘‘ಪೂಜಾರ್ಹನು ಅವನೊಬ್ಬನು ಮಾತ್ರ. ನೀವು ಅವನ ಜೊತೆ ಪಾಲುಗೊಳಿಸುವ ಎಲ್ಲವುಗಳಿಂದ ನಾನು ಮುಕ್ತನಾಗಿದ್ದೇನೆ.’’