ಅವರನ್ನು ಅವರ ಒಡೆಯನ ಮುಂದೆ ನಿಲ್ಲಿಸಲಾಗುವ ಸಂದರ್ಭವನ್ನು ನೀವು ಕಾಣಬೇಕಿತ್ತು! ಅವನು (ಅಲ್ಲಾಹನು) ಅವರೊಡನೆ ‘‘ಇದೆಲ್ಲಾ ಸತ್ಯವಲ್ಲವೆ?’’ ಎಂದು ಕೇಳುವನು. ಅವರು ‘‘ನಮ್ಮೊಡೆಯನಾಣೆ, ಇದೆಲ್ಲವೂ ಖಂಡಿತ ಸತ್ಯ’’ ಎನ್ನುವರು. ಆಗ ಅವನು ‘‘ನೀವು (ಇದನ್ನೆಲ್ಲಾ) ಧಿಕ್ಕರಿಸಿದ ಫಲಿತಾಂಶವಾಗಿ ಇದೀಗ ಶಿಕ್ಷೆಯನ್ನು ಸವಿಯಿರಿ’’ ಎಂದು ಹೇಳುವನು