(ದೂತರೇ,) ಹೇಳಿರಿ; ನೀವು ನೋಡಿದಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಶ್ರವಣ ಶಕ್ತಿಯನ್ನು ಹಾಗೂ ದೃಷ್ಟಿಯನ್ನು ಕಿತ್ತುಕೊಂಡರೆ ಮತ್ತು ನಿಮ್ಮ ಮನಸ್ಸುಗಳ ಮೇಲೆ ಮುದ್ರೆ ಒತ್ತಿ ಬಿಟ್ಟರೆ ಅಲ್ಲಾಹನ ಹೊರತು ಬೇರೆ ಯಾವ ದೇವರಿದ್ದಾರೆ, ಅವುಗಳನ್ನು ನಿಮಗೆ ತಂದು ಕೊಡಬಲ್ಲವರು? ನಾವು ಸತ್ಯದ ವಚನಗಳನ್ನು ಯಾವ ರೀತಿ ವಿಧವಿಧವಾಗಿ ವಿವರಿಸುತ್ತೇವೆ ಎಂಬುದನ್ನು ನೋಡಿರಿ – ಇಷ್ಟಾಗಿಯೂ ಅವರು (ಸತ್ಯದಿಂದ) ದೂರ ಉಳಿಯುತ್ತಿದ್ದಾರೆ