ಹೇಳಿರಿ; ನಾವೇನು, ಅಲ್ಲಾಹನನ್ನು ಬಿಟ್ಟು ನಮಗೆ ಯಾವುದೇ ಲಾಭವನ್ನಾಗಲಿ, ನಷ್ಟವನ್ನಾಗಲಿ ಮಾಡಲಾಗದವರಿಗೆ ಮೊರೆ ಇಡಬೇಕೇ? ಮತ್ತು ಅಲ್ಲಾಹನು ನಮಗೆ ಸನ್ಮಾರ್ಗವನ್ನು ತೋರಿದ ಬಳಿಕ ನಾವೇನು ಮತ್ತೆ ಬೆನ್ನು ತಿರುಗಿಸಿ ಮರಳಬೇಕೇ? ತನ್ನ ಸಂಗಡಿಗರು ‘ನಮ್ಮೆಡೆಗೆ ಬಾ’ ಎಂದು ತನ್ನನ್ನು ಸರಿದಾರಿಯೆಡೆಗೆ ಕರೆಯುತ್ತಿದ್ದರೂ, ಶೈತಾನರು ಮಂಕುಗೊಳಿಸಿದ್ದರಿಂದ ಭೂಮಿಯಲ್ಲಿ ದಾರಿ ತಪ್ಪಿ ಅಲೆಯುತ್ತಿರುವವನಂತೆ (ನಾವಾಗಬೇಕೇ)? ಹೇಳಿರಿ; ಅಲ್ಲಾಹನು ತೋರಿದ ದಾರಿಯೊಂದೇ ಸರಿದಾರಿಯಾಗಿದೆ. ನಮಗಂತು, ಸಕಲ ವಿಶ್ವಗಳ ಒಡೆಯನಿಗೆ ಶರಣಾಗಬೇಕೆಂದು ಆದೇಶಿಸಲಾಗಿದೆ