(ದೂತರೇ,) ಅವರನ್ನು (ಯುದ್ಧದಲ್ಲಿ ಶತ್ರುಗಳನ್ನು) ಕೊಂದದ್ದು ನೀವಲ್ಲ. ನಿಜವಾಗಿ ಅಲ್ಲಾಹನೇ ಅವರನ್ನು ಕೊಂದಿರುವನು. ನೀವು ಅದನ್ನು (ಹಿಡಿಮಣ್ಣನ್ನು) ಎಸೆದಾಗ, ನಿಜವಾಗಿ ಅದನ್ನು ಎಸೆದವರು ನೀವಲ್ಲ – ಅಲ್ಲಾಹನೇ ಅದನ್ನು ಎಸೆದಿದ್ದನು. ಅವನು ತನ್ನ ಕಡೆಯಿಂದ, ವಿಶ್ವಾಸಿಗಳನ್ನು ಶ್ರೇಷ್ಠ ಪರೀಕ್ಷೆಗೆ ಒಳಪಡಿಸ ಬಯಸಿದ್ದನು. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ