ತನ್ನ ಕಟ್ಟಡವನ್ನು ಅಲ್ಲಾಹನ ಭಯ ಹಾಗೂ ಅವನ ಮೆಚ್ಚುಗೆಯ ಬುನಾದಿಯ ಮೇಲೆ ಕಟ್ಟಿದವನು ಶ್ರೇಷ್ಠನೋ, ಅಥವಾ ಅವನನ್ನೂ ಹೊತ್ತು ನರಕಕ್ಕೆ ಕುಸಿದು ಬೀಳಲಿರುವ, ಭಾರೀ ಹೊಂಡವೊಂದರ ಅಸ್ಥಿರ ಅಂಚಿನಲ್ಲಿರುವ ಬುನಾದಿಯ ಮೇಲೆ ತನ್ನ ಕಟ್ಟಡವನ್ನು ಕಟ್ಟಿದವನು ಶ್ರೇಷ್ಠನೋ? ಅಕ್ರಮಿಗಳ ಪಂಗಡಕ್ಕೆ ಅಲ್ಲಾಹನು ಸರಿದಾರಿ ತೋರಿಸುವುದಿಲ್ಲ