ಪವಿತ್ರ ತಿಂಗಳ ಮುಂದೂಡಿಕೆಯು, ಧಿಕ್ಕಾರದ (ಧೋರಣೆಯ) ಮೇಲಿನ ಇನ್ನೊಂದು ಹೆಚ್ಚಳವಾಗಿದೆ. ಅಲ್ಲಾಹನು ನಿಷಿದ್ಧ ಗೊಳಿಸಿರುವ ತಿಂಗಳುಗಳ ಎಣಿಕೆ ಪೂರ್ತಿಗೊಳಿಸಲಿಕ್ಕಾಗಿ, ಅವರು ಆ ತಿಂಗಳನ್ನು ಒಂದು ವರ್ಷ ಸಮ್ಮತವಾಗಿಸುತ್ತಾರೆ ಮತ್ತು ಇನ್ನೊಂದು ವರ್ಷ ಅದನ್ನು ನಿಷಿದ್ಧವಾಗಿಸುತ್ತಾರೆ – ಈ ರೀತಿ ಅವರು ಅಲ್ಲಾಹನು ನಿಷೇಧಿಸಿರುವುದನ್ನು ಸಮ್ಮತವಾಗಿಸುತ್ತಾರೆ. ಅವರ ಪಾಲಿಗೆ ಅವರ ಕೆಟ್ಟ ಕರ್ಮಗಳನ್ನು ಚಂದಗಾಣಿಸಲಾಗಿದೆ. ಅಲ್ಲಾಹನು ಧಿಕ್ಕಾರಿಗಳಿಗೆ ಸರಿ ದಾರಿಯನ್ನು ತೋರಿಸುವುದಿಲ್ಲ