Back to Languages

Kannada - Chapter 80 - Abasa

Translation by Abdussalam Puthige — Permalink

Verse 1 — Surah Abasa 80:1

– ತಮ್ಮ ಬಳಿಗೆ ಕುರುಡನೊಬ್ಬನು ಬಂದನೆಂದು

Verse 2 — Surah Abasa 80:2

(ದೂತರೇ,) ನಿಮಗೇನು ಗೊತ್ತು – ಅವನು ಸಂಸ್ಕಾರವಂತನಾಗಲೂ ಬಹುದು

Verse 3 — Surah Abasa 80:3

ಅಥವಾ ಉಪದೇಶದ ಕುರಿತು ಅವನು ಚಿಂತಿಸ ಬಹುದು ಮತ್ತು ಅವನಿಗೆ

Verse 4 — Surah Abasa 80:4

ಉಪದೇಶದಿಂದ ಲಾಭವಾಗ ಬಹುದು

Verse 5 — Surah Abasa 80:5

(ನಿಮ್ಮನ್ನು) ಕಡೆಗಣಿಸುವವನು

Verse 6 — Surah Abasa 80:6

ಅವನೆಡೆಗೆ ನೀವು ಗಮನ ಹರಿಸುತ್ತೀರಿ

Verse 7 — Surah Abasa 80:7

ಅವನು ಸುಧಾರಿಸದಿದ್ದರೆ ನಿಮ್ಮ ಮೇಲೆ ದೋಷವೇನಿಲ್ಲ

Verse 8 — Surah Abasa 80:8

ಆದರೆ ನಿಮ್ಮೆಡೆಗೆ ಧಾವಿಸಿ ಬಂದ ವ್ಯಕ್ತಿ

Verse 9 — Surah Abasa 80:9

ಅವನು ಭಯಭಕ್ತಿ ಉಳ್ಳವನು

Verse 10 — Surah Abasa 80:10

ನೀವು ಅವನನ್ನು ನಿರ್ಲಕ್ಷಿಸುತ್ತೀರಿ

Verse 11 — Surah Abasa 80:11

ಹಾಗಲ್ಲ, ಇದು (ಕುರ್‌ಆನ್) ಒಂದು ಉಪದೇಶವಾಗಿದೆ

Verse 12 — Surah Abasa 80:12

ಇಷ್ಟ ಉಳ್ಳವನು ಇದರಿಂದ ಉಪದೇಶ ಪಡೆಯಲಿ

Verse 13 — Surah Abasa 80:13

ಇದು ಗೌರವಾರ್ಹ ಹಾಳೆಗಳಲ್ಲಿ ಲಿಖಿತವಾಗಿದೆ

Verse 14 — Surah Abasa 80:14

ಉನ್ನತ ಸ್ಥಾನದಲ್ಲಿದ್ದು, ಪಾವನವಾಗಿದೆ

Verse 15 — Surah Abasa 80:15

ಅದು ಬರೆಯುವವರ ಕೈಯಲ್ಲಿದೆ

Verse 16 — Surah Abasa 80:16

ಅವರು ಗೌರವಾನ್ವಿತರು ಮತ್ತು ಶ್ರೇಷ್ಠರು

Verse 17 — Surah Abasa 80:17

ಮಾನವನಿಗೆ ಛೀಮಾರಿ. ಅವನು ಅದೆಷ್ಟು ಕೃತಘ್ನನು

Verse 18 — Surah Abasa 80:18

ಅವನನ್ನು ಸೃಷ್ಟಿಸಲಾಗಿರುವುದು ಯಾವುದರಿಂದ

Verse 19 — Surah Abasa 80:19

ವೀರ್ಯದಿಂದ. ಅವನು (ಅಲ್ಲಾಹನು) ಆತನನ್ನು ಸೃಷ್ಟಿಸಿದನು ಹಾಗೂ ಆತನ ವಿಧಿಯನ್ನು ನಿಶ್ಚಯಿಸಿದನು

Verse 20 — Surah Abasa 80:20

ಆ ಬಳಿಕ ಅವನಿಗೆ ಬದುಕಿನ ದಾರಿಯನ್ನು ಸುಗಮಗೊಳಿಸಿದನು

Verse 21 — Surah Abasa 80:21

ಆ ಬಳಿಕ ಅವನನ್ನು ಸಾಯಿಸಿ ಅವನನ್ನು ಗೋರಿಗೆ ತಲುಪಿಸಿದನು

Verse 22 — Surah Abasa 80:22

ಆ ಬಳಿಕ ಅವನು, ತಾನಿಚ್ಛಿಸಿದಾಗ ಅವನನ್ನು ಪುನಃ ಜೀವಂತಗೊಳಿಸುವನು

Verse 23 — Surah Abasa 80:23

ಹಾಗಲ್ಲ, ಅವನು (ಮಾನವನು) ತನಗೆ ನೀಡಲಾದ ಆದೇಶವನ್ನು ಪಾಲಿಸಲಿಲ್ಲ

Verse 24 — Surah Abasa 80:24

ಮನುಷ್ಯನು ತನ್ನ ಆಹಾರದ ಕಡೆಗೊಮ್ಮೆ ನೋಡಲಿ

Verse 25 — Surah Abasa 80:25

ನೀರು ಸುರಿಸಿದವರು ನಾವು

Verse 26 — Surah Abasa 80:26

ಭೂಮಿಯನ್ನು ಸೀಳಿದವರು ನಾವು

Verse 27 — Surah Abasa 80:27

ಅದರಲ್ಲಿ ಬೆಳೆಗಳನ್ನು ಬೆಳೆದವರು ನಾವು

Verse 28 — Surah Abasa 80:28

ದ್ರಾಕ್ಷಿಗಳು ಹಾಗೂ ತರಕಾರಿಗಳು

Verse 29 — Surah Abasa 80:29

ಝೈತೂನ್ ಹಾಗೂ ಖರ್ಜೂರಗಳು

Verse 30 — Surah Abasa 80:30

ದಟ್ಟವಾದ ತೋಟಗಳು

Verse 31 — Surah Abasa 80:31

ಹಣ್ಣುಗಳು ಹಾಗೂ ಮೇವು

Verse 32 — Surah Abasa 80:32

ನಿಮಗಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ ಇದನ್ನೆಲ್ಲಾ ಮಾಡಲಾಯಿತು

Verse 33 — Surah Abasa 80:33

ಕೊನೆಗೆ ಪುನರುತ್ಥಾನದ ಕೋಲಾಹಲವು ಮೊಳಗಿದಾಗ

Verse 34 — Surah Abasa 80:34

ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು

Verse 35 — Surah Abasa 80:35

ತನ್ನ ತಂದೆಯಿಂದಲೂ ತಾಯಿಯಿಂದಲೂ

Verse 36 — Surah Abasa 80:36

ಪತ್ನಿಯಿಂದಲೂ ಪುತ್ರರಿಂದಲೂ (ದೂರ ಓಡುವನು)

Verse 37 — Surah Abasa 80:37

ಅಂದು ಪ್ರತಿಯೊಬ್ಬನೂ ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು

Verse 38 — Surah Abasa 80:38

ಅಂದು ಕೆಲವು ಮುಖಗಳು ಉಜ್ವಲವಾಗಿರುವವು

Verse 39 — Surah Abasa 80:39

ನಗುತ್ತಾ ಸಂಭ್ರಮಿಸುತ್ತಿರುವವು

Verse 40 — Surah Abasa 80:40

ಮತ್ತೆ ಕೆಲವು ಮುಖಗಳ ಮೇಲೆ ಅಂದು ಧೂಳು ತುಂಬಿರುವುದು

Verse 41 — Surah Abasa 80:41

(ಮತ್ತು ) ಕರಾಳತೆ ಕವಿದಿರುವುದು

Verse 42 — Surah Abasa 80:42

ಅವರು ಧಿಕ್ಕಾರಿ ದುಷ್ಕರ್ಮಿಗಳಾಗಿರುವರು