Back to Languages

    Kannada - Chapter 91

    Translation by Abdussalam Puthige

    Verse 1

    ಸೂರ್ಯನ ಹಾಗೂ ಅದರ ಬೆಳಕಿನಾಣೆ

    Verse 2

    ಮತ್ತು ಅದರ (ಸೂರ್ಯನ) ಬೆನ್ನಿಗೇ ಉದಯಿಸುವ ಚಂದ್ರನಾಣೆ

    Verse 3

    ಹಗಲಿನ ಹಾಗೂ ಅದನ್ನು ಬೆಳಗಿಸಿದವನಾಣೆ

    Verse 4

    ಅದನ್ನು ಮರೆ ಮಾಚಿಬಿಡುವ ರಾತ್ರಿಯಾಣೆ

    Verse 5

    ಆಕಾಶದ ಹಾಗೂ ಅದನ್ನು ನಿರ್ಮಿಸಿದವನಾಣೆ

    Verse 6

    ಭೂಮಿಯ ಹಾಗೂ ಅದನ್ನು ಹರಡಿದವನಾಣೆ

    Verse 7

    ಮನುಷ್ಯ ಚಿತ್ತದ ಹಾಗೂ ಅದನ್ನು ರೂಪಿಸಿದವನಾಣೆ

    Verse 8

    ಆ ಬಳಿಕ ಅದಕ್ಕೆ ದುಷ್ಟತನದ ಹಾಗೂ ಧರ್ಮ ನಿಷ್ಠೆಯ ಅರಿವು ನೀಡಿದವನಾಣೆ

    Verse 9

    ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು

    Verse 10

    ಅದನ್ನು ಮಲಿನ ಗೊಳಿಸಿದವನು ಸೋತನು

    Verse 11

    ಸಮೂದ್ ಜನಾಂಗದವರು ತಮ್ಮ ಅಹಂಕಾರದ ಕಾರಣ (ದೂತರನ್ನು) ತಿರಸ್ಕರಿಸಿದರು

    Verse 12

    ಅವರಲ್ಲಿನ ತೀರಾ ದುಷ್ಟನೊಬ್ಬನು ಎದ್ದು ನಿಂತನು

    Verse 13

    ಆಗ ಅಲ್ಲಾಹನ ದೂತರು – ಅಲ್ಲಾಹನ ಒಂಟೆ ಮತ್ತು ಅವರ ನೀರು ಕುಡಿಯುವ ಸರದಿಯ ಕುರಿತು ಎಚ್ಚರವಿರಲಿ – ಎಂದರು

    Verse 14

    ಆದರೆ ಅವರು ಅವರ (ದೂತರ) ಮಾತನ್ನು (ಸುಳ್ಳೆಂದು) ತಿರಸ್ಕರಿಸಿದರು ಹಾಗೂ ಅದರ (ಒಂಟೆಯ) ಕಾಲುಗಳನ್ನು ಕಡಿದು ಬಿಟ್ಟರು. ಆಗ ಅವರ ಪಾಪದ ಕಾರಣ ಅವರ ಒಡೆಯನು ಅವರ ಮೇಲೊಂದು ಶಿಕ್ಷೆಯನ್ನು ಎರಗಿಸಿದನು ಹಾಗೂ ಅವರನ್ನು ನೆಲಸಮ ಗೊಳಿಸಿಬಿಟ್ಟನು

    Verse 15

    ಅದರ ಪರಿಣಾಮವೇನಾದೀತು ಎಂದು ಅವನು ಅಂಜಲಿಲ್ಲ