Back to Languages

Kannada - Chapter 74 - Al-Muddaththir

Translation by Abdussalam Puthige — Permalink

Verse 1 — Surah Al-Muddaththir 74:1

ಹೊದ್ದುಕೊಂಡಿರುವವರೇ

Verse 2 — Surah Al-Muddaththir 74:2

ಎದ್ದೇಳಿರಿ ಮತ್ತು ಎಚ್ಚರಿಸಿರಿ

Verse 3 — Surah Al-Muddaththir 74:3

ನಿಮ್ಮ ಒಡೆಯನ ಹಿರಿಮೆಯನ್ನು ಕೊಂಡಾಡಿರಿ

Verse 4 — Surah Al-Muddaththir 74:4

ನಿಮ್ಮ ವಸ್ತ್ರಗಳನ್ನು ಶುಚಿಯಾಗಿಡಿ

Verse 5 — Surah Al-Muddaththir 74:5

ಮಾಲಿನ್ಯಗಳಿಂದ ದೂರ ಉಳಿಯಿರಿ

Verse 6 — Surah Al-Muddaththir 74:6

(ಉಪಕೃತನಿಂದ) ಹೆಚ್ಚಿನದನ್ನು ಪಡೆಯಲಿಕ್ಕಾಗಿ ಉಪಕಾರ ಮಾಡಬೇಡಿರಿ

Verse 7 — Surah Al-Muddaththir 74:7

ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ

Verse 8 — Surah Al-Muddaththir 74:8

(ಲೋಕಾಂತ್ಯದ) ಕಹಳೆಯನ್ನು ಊದಲಾದಾಗ

Verse 9 — Surah Al-Muddaththir 74:9

ಆ ದಿನವು ಬಹಳ ಕಠಿಣ ದಿನವಾಗಿರುವುದು

Verse 10 — Surah Al-Muddaththir 74:10

ಧಿಕ್ಕಾರಿಗಳ ಪಾಲಿಗೆ ಅದು ಸುಲಭವಾಗಿರಲಾರದು

Verse 11 — Surah Al-Muddaththir 74:11

ಬಿಟ್ಟು ಬಿಡಿರಿ, ನನ್ನನ್ನು ಮತ್ತು ನಾನು ಸೃಷ್ಟಿಸುವಾಗ ಒಂಟಿಯಾಗಿದ್ದಾತನನ್ನು

Verse 12 — Surah Al-Muddaththir 74:12

(ಮುಂದೆ) ನಾನು ಅವನಿಗೆ ಧಾರಾಳ ಸಂಪತ್ತನ್ನು ನೀಡಿದೆನು

Verse 13 — Surah Al-Muddaththir 74:13

ಮತ್ತು ಸದಾ ಅವನ ಜೊತೆಗಿರುವ ಪುತ್ರರನ್ನು ನೀಡಿದೆನು

Verse 14 — Surah Al-Muddaththir 74:14

ಮತ್ತು ಅವನಿಗೆ ಎಲ್ಲ ಬಗೆಯ ಸಾಧನಗಳನ್ನು ಒದಗಿಸಿದೆನು

Verse 15 — Surah Al-Muddaththir 74:15

ಆದರೆ ಅವನು, ನಾನು ಮತ್ತಷ್ಟು ನೀಡಬೇಕೆಂದು ಆಸೆ ಪಡುತ್ತಿದ್ದಾನೆ

Verse 16 — Surah Al-Muddaththir 74:16

ಹಾಗಾಗದು; ಅವನು ನಮ್ಮ ವಚನಗಳ ಶತ್ರುವಾಗಿರುವನು

Verse 17 — Surah Al-Muddaththir 74:17

ನಾನು ಅವನನ್ನು (ನರಕದ) ದುರ್ಗಮ ಬೆಟ್ಟವನ್ನು ಹತ್ತಿಸಲಿರುವೆನು

Verse 18 — Surah Al-Muddaththir 74:18

ಅವನು ಯೋಚಿಸಿದನು ಮತ್ತು ನಿರ್ಧರಿಸಿಕೊಂಡನು

Verse 19 — Surah Al-Muddaththir 74:19

ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು

Verse 20 — Surah Al-Muddaththir 74:20

ಮತ್ತೆ, ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು

Verse 21 — Surah Al-Muddaththir 74:21

ಮತ್ತೆ ಅವನು ನೋಡಿದನು

Verse 22 — Surah Al-Muddaththir 74:22

ಮತ್ತೆ ಅವನು ಹುಬ್ಬೇರಿಸಿ ಮುಖ ತಿರುಚಿಕೊಂಡನು

Verse 23 — Surah Al-Muddaththir 74:23

ಮತ್ತೆ ಅವನು ತಿರುಗಿ ನಿಂತನು ಮತ್ತು ಅಹಂಕಾರ ತೋರಿದನು

Verse 24 — Surah Al-Muddaththir 74:24

ಮತ್ತೆ ಅವನು ಹೇಳಿದನು; ‘‘ಇದು ಪರಂಪರಾಗತ ಮಾಟಗಾರಿಕೆಯೇ ಹೊರತು ಬೇರೇನಲ್ಲ’’

Verse 25 — Surah Al-Muddaththir 74:25

‘‘ಇದು ಕೇವಲ ಮನುಷ್ಯನ ಮಾತೇ ಹೊರತು ಬೇರೇನಲ್ಲ’’

Verse 26 — Surah Al-Muddaththir 74:26

ನಾವು ಅವನನ್ನು ‘ಸಕರ್’ಗೆ (ನರಕಕ್ಕೆ) ಎಸಯಲಿರುವೆವು

Verse 27 — Surah Al-Muddaththir 74:27

ಸಕರ್ ಏನೆಂದು ನಿಮಗೇನು ಗೊತ್ತು

Verse 28 — Surah Al-Muddaththir 74:28

ಅದು ಉಳಿಯಲೂ ಬಿಡದು ಅಳಿಯಲೂ ಬಿಡದು

Verse 29 — Surah Al-Muddaththir 74:29

ಅದು ಮನುಷ್ಯನನ್ನು ಸುಟ್ಟು ಕರ್ರಗಾಗಿಸುವುದು

Verse 30 — Surah Al-Muddaththir 74:30

ಅದರ ಮೇಲೆ ಹತ್ತೊಂಭತ್ತು ಮಂದಿ (ಕಾವಲುಗಾರರು) ಇರುವರು

Verse 31 — Surah Al-Muddaththir 74:31

ನಾವು ಮಲಕ್‌ಗಳನ್ನೇ ನರಕದ ಕಾವಲುಗಾರರಾಗಿಸಿರುವೆವು ಮತ್ತು ಅವರ ಸಂಖ್ಯೆಯನ್ನು ಧಿಕ್ಕಾರಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು – ಗ್ರಂಥದವರು ನಂಬಲೆಂದು ಹಾಗೂ ವಿಶ್ವಾಸಿಗಳ ವಿಶ್ವಾಸವು ಹೆಚ್ಚಲೆಂದು ಮತ್ತು ಗ್ರಂಥದವರಾಗಲಿ ವಿಶ್ವಾಸಿಗಳಾಗಲಿ ಸಂಶಯಕ್ಕೆ ತುತ್ತಾಗಬಾರದೆಂದು ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಧಿಕ್ಕಾರಿಗಳು ‘‘ಈ ಉದಾಹರಣೆಯ ಮೂಲಕ ಅಲ್ಲಾಹನು ಬಯಸುವುದೇನನ್ನು?’’ ಎಂದು ಕೇಳಲೆಂದು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ. ಹಾಗೂ ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ನಿಮ್ಮ ಒಡೆಯನ ಪಡೆಗಳ ಕುರಿತು ಅವನ ಹೊರತು ಬೇರೆ ಯಾರಿಗೂ ತಿಳಿಯದು. ಇದು ಮಾನವರಿಗಾಗಿರುವ ಉಪದೇಶ ಮಾತ್ರವಾಗಿದೆ

Verse 32 — Surah Al-Muddaththir 74:32

ಹಾಗೇನೂ ಅಲ್ಲ, ಚಂದ್ರನಾಣೆ

Verse 33 — Surah Al-Muddaththir 74:33

ಮತ್ತು ಇರುಳು ಮರಳುವಾಗಿನ ಆಣೆ

Verse 34 — Surah Al-Muddaththir 74:34

ಮತ್ತು ಮುಂಜಾವು ಬೆಳಗುವಾಗಿನಾಣೆ

Verse 35 — Surah Al-Muddaththir 74:35

ಅದು (ನರಕವು) ಒಂದು ಮಹಾ ವಿಪತ್ತಾಗಿದೆ

Verse 36 — Surah Al-Muddaththir 74:36

ಜನರು ಅಂಜ ಬೇಕಾದ ವಸ್ತುವಾಗಿದೆ

Verse 37 — Surah Al-Muddaththir 74:37

ನಿಮ್ಮ ಪೈಕಿ ಇಷ್ಟ ಉಳ್ಳವನು ಮುಂದೆ ಹೋಗಲಿ ಅಥವಾ ಹಿಂದೆ ಉಳಿಯಲಿ

Verse 38 — Surah Al-Muddaththir 74:38

ಪ್ರತಿಯೊಬ್ಬನೂ ತನ್ನ ಕರ್ಮಗಳ ಬದಲಿಗೆ ಒತ್ತೆಯಾಳಾಗಿರುವನು

Verse 39 — Surah Al-Muddaththir 74:39

ಬಲಭಾಗದವರ ಹೊರತು

Verse 40 — Surah Al-Muddaththir 74:40

ಅವರು ಸ್ವರ್ಗ ತೋಟಗಳಲ್ಲಿ ಇರುವರು ಮತ್ತು ಪ್ರಶ್ನಿಸುವರು

Verse 41 — Surah Al-Muddaththir 74:41

ಅಪರಾಧಿಗಳೊಡನೆ

Verse 42 — Surah Al-Muddaththir 74:42

‘‘ನೀವೇಕೆ ನರಕಕ್ಕೆ ಹೋದಿರಿ?’’

Verse 43 — Surah Al-Muddaththir 74:43

ಅವರು ಹೇಳುವರು; ‘‘ನಾವು ನಮಾಝ್ ಸಲ್ಲಿಸುವವರಾಗಿರಲಿಲ್ಲ’’

Verse 44 — Surah Al-Muddaththir 74:44

‘‘ಮತ್ತು ನಾವು ಬಡವರಿಗೆ ಉಣಿಸುತ್ತಿರಲಿಲ್ಲ’’

Verse 45 — Surah Al-Muddaththir 74:45

‘‘ನಿರರ್ಥಕ ಮಾತುಗಳನ್ನಾಡುವವರ ಜೊತೆಗಿದ್ದು ನಾವೂ ನಿರರ್ಥಕ ಮಾತುಗಳನ್ನಾಡುತ್ತಿದ್ದೆವು’’

Verse 46 — Surah Al-Muddaththir 74:46

‘‘ಮತ್ತು ನಾವು ಅಂತಿಮ ವಿಚಾರಣೆಯ ದಿನವನ್ನು ಅಲ್ಲಗಳೆಯುತ್ತಿದ್ದೆವು’’

Verse 47 — Surah Al-Muddaththir 74:47

‘‘ಕೊನೆಗೆ ಖಚಿತವಾದ ಆ ಸಂಭವವು (ಮರಣ) ನಮ್ಮ ಬಳಿಗೆ ಬಂದು ಬಿಟ್ಟಿತು’’

Verse 48 — Surah Al-Muddaththir 74:48

ಶಿಫಾರಸುದಾರರ ಶಿಫಾರಸಿನಿಂದ ಅವರಿಗೆ ಯಾವ ಲಾಭವೂ ಆಗದು

Verse 49 — Surah Al-Muddaththir 74:49

ಅವರಿಗೇನಾಗಿದೆ? ಉಪದೇಶವನ್ನು ಅವರೇಕೆ ಕಡೆಗಣಿಸುತ್ತಿದ್ದಾರೆ

Verse 50 — Surah Al-Muddaththir 74:50

ಅವರು (ಸತ್ಯದ ಮುಂದೆ) ಕತ್ತೆಗಳಂತೆ ಬೆಚ್ಚಿ ಬೀಳುತ್ತಿದ್ದಾರೆ

Verse 51 — Surah Al-Muddaththir 74:51

ಸಿಂಹಕ್ಕೆ ಅಂಜಿ ಓಡುತ್ತಿರುವ (ಕತ್ತೆಗಳಂತೆ)

Verse 52 — Surah Al-Muddaththir 74:52

ನಿಜವಾಗಿ ಅವರ ಪೈಕಿ ಪ್ರತಿಯೊಬ್ಬರೂ, ತಮ್ಮ ಬಳಿಗೆ ತೆರೆದ ಗ್ರಂಥವೊಂದು (ಆಕಾಶದಿಂದ ಇಳಿದು) ಬರಬೇಕೆಂದು ಅಪೇಕ್ಷಿಸುತ್ತಿದ್ದಾರೆ

Verse 53 — Surah Al-Muddaththir 74:53

ಹಾಗೇನೂ ಅಲ್ಲ. ನಿಜವಾಗಿ ಅವರಿಗೆ ಪರಲೋಕದ ಭಯವಿಲ್ಲ

Verse 54 — Surah Al-Muddaththir 74:54

ಹಾಗೇನೂ ಅಲ್ಲ. ಇದು ಖಂಡಿತ ಒಂದು ಉಪದೇಶವಾಗಿದೆ

Verse 55 — Surah Al-Muddaththir 74:55

ಇಷ್ಟವುಳ್ಳವನು ಇದನ್ನು ನೆನಪಿಡಲಿ

Verse 56 — Surah Al-Muddaththir 74:56

ಅಲ್ಲಾಹನು ಇಚ್ಛಿಸುವವನು ಮಾತ್ರ ಇದನ್ನು ನೆನಪಿಡುವನು. ಅವನು (ಅಲ್ಲಾಹನು) ಭಕ್ತಿಗೆ ಅರ್ಹನು ಹಾಗೂ ಕ್ಷಮಿಸುವವನಾಗಿದ್ದಾನೆ