Back to LanguagesPrevious ChapterNext Chapter EnglishArabicUrduHindiTamilBengali
Kannada - Chapter 92 - Al-Layl
Translation by Abdussalam Puthige — Permalink
Verse 1 — Surah Al-Layl 92:1
ರಾತ್ರಿಯಾಣೆ – ಅದು, ಅದನ್ನು (ಹಗಲನ್ನು) ಮರೆ ಮಾಚಿದಾಗ
Verse 2 — Surah Al-Layl 92:2
ಹಗಲಿನಾಣೆ – ಅದು ಬೆಳಗಿದಾಗ
Verse 3 — Surah Al-Layl 92:3
ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದವನಾಣೆ
Verse 4 — Surah Al-Layl 92:4
ನಿಮ್ಮ ಶ್ರಮಗಳು ವಿವಿಧ ಬಗೆಯದ್ದಾಗಿವೆ
Verse 5 — Surah Al-Layl 92:5
ದಾನ ಮಾಡಿದವನು ಹಾಗೂ ಧರ್ಮ ನಿಷ್ಠನಾಗಿರುವವನು
Verse 6 — Surah Al-Layl 92:6
ಮತ್ತು ಒಳಿತನ್ನು ಸಮರ್ಥಿಸಿದವನು –
Verse 7 — Surah Al-Layl 92:7
– ಅವನ ಪಾಲಿಗೆ ನಾವು ಸರಳವಾದ ಮಾರ್ಗದ ಸುಲಭ ಗೊಳಿಸುವೆವು
Verse 8 — Surah Al-Layl 92:8
ಮತ್ತು ಜಿಪುಣತೆ ತೋರಿದ ಹಾಗೂ ನಿರ್ಲಕ್ಷಿಸಿದವನು
Verse 9 — Surah Al-Layl 92:9
ಮತ್ತು ಒಳಿತನ್ನು ತಿರಸ್ಕರಿಸಿದವನು –
Verse 10 — Surah Al-Layl 92:10
– ಅವನ ಪಾಲಿಗೆ ನಾವು ಕಠಿಣವಾದ ಮಾರ್ಗವನ್ನು ಸುಲಭಗೊಳಿಸುವೆವು
Verse 11 — Surah Al-Layl 92:11
ಅವನು ಉರುಳಿ ಬಿದ್ದಾಗ ಅವನ ಸಂಪತ್ತು ಅವನ ಯಾವ ಕೆಲಸಕ್ಕೂ ಬಾರದು
Verse 12 — Surah Al-Layl 92:12
ದಾರಿ ತೋರುವ ಹೊಣೆಯು ಖಂಡಿತ ನಮ್ಮ ಮೇಲಿದೆ
Verse 13 — Surah Al-Layl 92:13
ಪರಲೋಕವೂ ಇಹಲೋಕವೂ ಖಂಡಿತ ನಮಗೇ ಸೇರಿವೆ
Verse 14 — Surah Al-Layl 92:14
ನಾನು ನಿಮಗೆ ಧಗಧಗಿಸುವ ಅಗ್ನಿಯ ಕುರಿತು ಮುನ್ನೆಚ್ಚರಿಕೆ ನೀಡುತ್ತಿದ್ದೇನೆ
Verse 15 — Surah Al-Layl 92:15
ಭಾಗ್ಯಹೀನನು ಮಾತ್ರ ಅದರೊಳಗೆ ಪ್ರವೇಶಿಸುವನು –
Verse 16 — Surah Al-Layl 92:16
– ಅವನು (ಸತ್ಯವನ್ನು) ತಿರಸ್ಕರಿಸಿದವನು ಹಾಗೂ ಅದರಿಂದ ಮುಖ ತಿರುಗಿಸಿ ಕೊಂಡವನು
Verse 17 — Surah Al-Layl 92:17
ಅಲ್ಲಾಹನು ಧರ್ಮ ನಿಷ್ಠನನ್ನು ಅದರಿಂದ ರಕ್ಷಿಸುವನು
Verse 18 — Surah Al-Layl 92:18
ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು (ಸನ್ಮಾರ್ಗದಲ್ಲಿ) ದಾನ ಮಾಡುತ್ತಾನೆ
Verse 19 — Surah Al-Layl 92:19
ಅವನು ಮರು ಪಾವತಿಸಬೇಕಾದ ಯಾವ ಋಣವೂ ಅವನ ಮೇಲಿಲ್ಲ –
Verse 20 — Surah Al-Layl 92:20
ಅವನು (ಮಾಡುವ ದಾನವೆಲ್ಲಾ) ಕೇವಲ ತನ್ನ ಪರಮೋನ್ನತ ಒಡೆಯನನ್ನು (ಅಲ್ಲಾಹನನ್ನು) ಮೆಚ್ಚಿಸುವುದಕ್ಕಾಗಿ ಮಾತ್ರವಾಗಿರುತ್ತದೆ
Verse 21 — Surah Al-Layl 92:21
ಮತ್ತು ಅವನು ಬಹು ಬೇಗನೇ ಸಂತೃಪ್ತನಾಗುವನು