Back to Languages

Kannada - Chapter 93 - Ad-Duhaa

Translation by Abdussalam Puthige — Permalink

Verse 1 — Surah Ad-Duhaa 93:1

ಬಿಸಿಲೇರುವ ಸಮಯದಾಣೆ

Verse 2 — Surah Ad-Duhaa 93:2

ಇರುಳು ಆವರಿಸುವಾಗಿನಾಣೆ

Verse 3 — Surah Ad-Duhaa 93:3

(ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ತೊರೆದಿಲ್ಲ ಮತ್ತು ಅವನು ನಿಮ್ಮಿಂದ ಮುನಿದು ಕೊಂಡಿಲ್ಲ

Verse 4 — Surah Ad-Duhaa 93:4

ನಿಮ್ಮ ಪಾಲಿಗೆ ಅನಂತರದ್ದು ಮೊದಲಿನದಕ್ಕಿಂತ (ಪರಲೋಕವು ಇಹಲೋಕಕ್ಕಿಂತ) ಉತ್ತಮವಾಗಿದೆ

Verse 5 — Surah Ad-Duhaa 93:5

ಶೀಘ್ರವೇ ನಿಮ್ಮೊಡೆಯನು, ನೀವು ಸಂತೃಪ್ತರಾಗುವಷ್ಟನ್ನು ನಿಮಗೆ ನೀಡುವನು

Verse 6 — Surah Ad-Duhaa 93:6

ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ ನೀಡಿರಲಿಲ್ಲವೇ

Verse 7 — Surah Ad-Duhaa 93:7

ನೀವು ದಾರಿ ತಿಳಿಯದವರಾಗಿದ್ದುದನ್ನು ಕಂಡು ಅವನು ನಿಮಗೆ ದಾರಿ ತೋರಲಿಲ್ಲವೇ

Verse 8 — Surah Ad-Duhaa 93:8

ಮತ್ತು ನೀವು ದಾರಿದ್ರದಲ್ಲಿದ್ದುದನ್ನು ಕಂಡು ಅವನು ನಿಮ್ಮನ್ನು ಸಂಪನ್ನ ರಾಗಿಸಲಿಲ್ಲವೇ

Verse 9 — Surah Ad-Duhaa 93:9

ನೀವಿನ್ನು ಅನಾಥರನ್ನು ಗದರಿಸಬೇಡಿ

Verse 10 — Surah Ad-Duhaa 93:10

ಮತ್ತು ಬೇಡುವವನನ್ನು ಜರೆಯಬೇಡಿ

Verse 11 — Surah Ad-Duhaa 93:11

ಮತ್ತು ನಿಮ್ಮ ಒಡೆಯನ ಕೊಡುಗೆಗಳನ್ನು (ಜನರಿಗೆ) ವಿವರವಾಗಿ ತಿಳಿಸಿರಿ