Back to Languages

Kannada - Chapter 78 - An-Naba

Translation by Abdussalam Puthige — Permalink

Verse 1 — Surah An-Naba 78:1

ಆ ಮಹಾ ವಾರ್ತೆಯ ಕುರಿತೇ

Verse 2 — Surah An-Naba 78:2

ಆ ವಿಷಯದಲ್ಲಿ ಅವರ ನಿಲುವುಗಳು ತೀರಾ ಭಿನ್ನವಾಗಿವೆ

Verse 3 — Surah An-Naba 78:3

ಹಾಗಲ್ಲ, ಅವರಿಗೆ ಬೇಗನೆ ತಿಳಿಯಲಿದೆ

Verse 4 — Surah An-Naba 78:4

ಮತ್ತೆ, ಹಾಗಲ್ಲ, ಅವರಿಗೆ ಬೇಗನೆ ತಿಳಿಯಲಿದೆ

Verse 5 — Surah An-Naba 78:5

ಭೂಮಿಯನ್ನು ನಾವು ಹಾಸಿಗೆಯಾಗಿಸಿಲ್ಲವೇ

Verse 6 — Surah An-Naba 78:6

ಮತ್ತು ಪರ್ವತಗಳನ್ನು ಮೊಳೆಗಳಾಗಿಸಿಲ್ಲವೇ

Verse 7 — Surah An-Naba 78:7

ಮತ್ತು ನಾವು ನಿಮ್ಮನ್ನು ಜೋಡಿಗಳಾಗಿ ಸೃಷ್ಟಿಸಿರುವೆವು

Verse 8 — Surah An-Naba 78:8

ಮತ್ತು ನಾವು ನಿಮ್ಮ ನಿದ್ರೆಯನ್ನು (ನಿಮ್ಮ ಪಾಲಿಗೆ) ವಿಶ್ರಾಂತಿಯಾಗಿಸಿರುವೆವು

Verse 9 — Surah An-Naba 78:9

ಮತ್ತು ನಾವು ರಾತ್ರಿಯನ್ನು ಮರೆಯಾಗಿಸಿರುವೆವು

Verse 10 — Surah An-Naba 78:10

ಮತ್ತು ನಾವು ಹಗಲನ್ನು ಸಂಪಾದನೆಯ ಸಮಯವಾಗಿಸಿರುವೆವು

Verse 11 — Surah An-Naba 78:11

ಮತ್ತು ನಿಮ್ಮ ಮೇಲೆ ಬಲಿಷ್ಠವಾದ ಏಳು ವಸ್ತು (ಆಕಾಶ)ಗಳನ್ನು ನಿರ್ಮಿಸಿರುವೆವು

Verse 12 — Surah An-Naba 78:12

ಮತ್ತು ನಾವು ಸೂರ್ಯನನ್ನು ಒಂದು ಉಜ್ವಲ ಜ್ಯೋತಿಯಾಗಿಸಿರುವೆವು

Verse 13 — Surah An-Naba 78:13

ಮತ್ತು ನಾವು ಮೋಡಗಳಿಂದ ಧಾರಾಕಾರ ನೀರನ್ನು ಸುರಿಸಿರುವೆವು

Verse 14 — Surah An-Naba 78:14

ಆ ಮೂಲಕ ವಿವಿಧ ಬೆಳೆ ಹಾಗೂ ತರಕಾರಿಗಳನ್ನು ಬೆಳೆಸಲಿಕ್ಕಾಗಿ

Verse 15 — Surah An-Naba 78:15

ಮತ್ತು ದಟ್ಟವಾದ ತೋಟಗಳನ್ನು ಬೆಳೆಸಲಿಕ್ಕಾಗಿ

Verse 16 — Surah An-Naba 78:16

ತೀರ್ಪಿನ ದಿನವು ಈಗಾಗಲೇ ನಿಶ್ಚಿತವಾಗಿದೆ

Verse 17 — Surah An-Naba 78:17

ಕಹಳೆಯನ್ನು ಊದುವ ದಿನ ನೀವು ದಂಡು ದಂಡುಗಳಾಗಿ ಬರುವಿರಿ

Verse 18 — Surah An-Naba 78:18

ಆಕಾಶವನ್ನು ತೆರೆದು ಬಿಡಲಾಗುವುದು ಮತ್ತು ಅದರಲ್ಲಿ (ಎಲ್ಲೆಲ್ಲೂ) ಬಾಗಿಲುಗಳೇ ಇರುವವು

Verse 19 — Surah An-Naba 78:19

ಮತ್ತು ಪರ್ವತಗಳನ್ನು ನಡೆಸಲಾಗುವುದು, ಅವು ಮರಳಿನಂತಾಗಿ ಬಿಡುವವು

Verse 20 — Surah An-Naba 78:20

ಖಂಡಿತವಾಗಿಯೂ ನರಕವು ಹೊಂಚು ಹಾಕುತ್ತಿದೆ

Verse 21 — Surah An-Naba 78:21

ಅದುವೇ ವಿದ್ರೋಹಿಗಳ ನೆಲೆಯಾಗುವುದು

Verse 22 — Surah An-Naba 78:22

ಯುಗ ಯುಗಾಂತರ ಕಾಲ ಅವರು ಅದರಲ್ಲಿ ಬಿದ್ದು ಕೊಂಡಿರುವರು

Verse 23 — Surah An-Naba 78:23

ಅಲ್ಲಿ ಅವರು ಯಾವುದೇ ತಂಪು ವಸ್ತುವಿನ ಅಥವಾ ಯಾವುದೇ ಪಾನೀಯದ ರುಚಿ ಕಾಣಲಾರರು

Verse 24 — Surah An-Naba 78:24

ಅಲ್ಲಿ ಅವರಿಗೆ ಸಿಗುವುದು, ಕುದಿಯುವ ನೀರು ಮತ್ತು ಹರಿಯುವ ಕೀವು ಮಾತ್ರ

Verse 25 — Surah An-Naba 78:25

ಇದು ಸೂಕ್ತ ಪ್ರತಿಫಲವಾಗಿದೆ

Verse 26 — Surah An-Naba 78:26

ಅವರು (ಪರಲೋಕದ) ವಿಚಾರಣೆಯನ್ನು ನಿರೀಕ್ಷಿಸಿಯೇ ಇರಲಿಲ್ಲ

Verse 27 — Surah An-Naba 78:27

ಅವರು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸುತ್ತಿದ್ದರು

Verse 28 — Surah An-Naba 78:28

ನಾವು ಎಲ್ಲವನ್ನೂ ಬರೆದು ಭದ್ರವಾಗಿಟ್ಟಿರುವೆವು

Verse 29 — Surah An-Naba 78:29

ಇದೀಗ ಸವಿಯಿರಿ. ಇನ್ನು ನಿಮ್ಮ ಪಾಲಿಗೆ ಶಿಕ್ಷೆಯ ಹೊರತು ಬೇರೇನೂ ಹೆಚ್ಚದು

Verse 30 — Surah An-Naba 78:30

ಧರ್ಮ ನಿಷ್ಠರಿಗೆ ಖಂಡಿತ ವಿಜಯ ಸಿಗಲಿದೆ

Verse 31 — Surah An-Naba 78:31

ತೋಟಗಳು ಮತ್ತು ದ್ರಾಕ್ಷಿಗಳು

Verse 32 — Surah An-Naba 78:32

ಮತ್ತು ಸಹ ವಯಸ್ಕ ಯುವತಿಯರು

Verse 33 — Surah An-Naba 78:33

ತುಂಬಿ ತುಳುಕುವ ಪಾನ ಪಾತ್ರೆಗಳು (ಅವರಿಗಾಗಿ ಕಾದಿವೆ)

Verse 34 — Surah An-Naba 78:34

ಅಲ್ಲಿ ಅವರು ಯಾವುದೇ ಅಸಭ್ಯ ಮಾತನ್ನಾಗಲೀ ಸುಳ್ಳನ್ನಾಗಲೀ ಕೇಳಲಾರರು

Verse 35 — Surah An-Naba 78:35

ಇದು ಸತ್ಫಲವಾಗಿದೆ, ನಿಮ್ಮ ಒಡೆಯನ ಕಡೆಯಿಂದ. (ಅಲ್ಲದೆ ನಿಮಗಾಗಿ) ಧಾರಾಳ ಉಡುಗೊರೆಗಳಿವೆ

Verse 36 — Surah An-Naba 78:36

ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವೆರಡರ ನಡುವೆ ಇರುವ ಎಲ್ಲವುಗಳ ಒಡೆಯನು, ಅವನು ಪರಮ ದಯಾಮಯನು. ಅವನೊಡನೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ

Verse 37 — Surah An-Naba 78:37

ರೂಹ್ (ಜಿಬ್‌ರೀಲ್) ಮತ್ತು ಇತರ ಮಲಕ್‌ಗಳು ಸಾಲಾಗಿ ನಿಲ್ಲುವ ಆ ದಿನ, ಆ ಪರಮ ದಯಾಮಯನ ಅಪ್ಪಣೆ ಪಡೆದವರು ಹಾಗೂ ಸರಿಯಾದುದನ್ನು ಹೇಳುವವರ ಹೊರತು ಯಾರಿಗೂ ಮಾತನಾಡಲು ಸಾಧ್ಯವಾಗದು

Verse 38 — Surah An-Naba 78:38

ಆ ದಿನವು ನಿಜಕ್ಕೂ ಬರಲಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಬಳಿ ಆಶ್ರಯವನ್ನು ಪಡೆದು ಕೊಳ್ಳಲಿ

Verse 39 — Surah An-Naba 78:39

ನಾನಂತೂ ನಿಮ್ಮನ್ನು, ಶೀಘ್ರವೇ ಬರಲಿರುವ ಶಿಕ್ಷೆಯ ಕುರಿತು ಎಚ್ಚರಿಸುತ್ತಿರುವೆನು. ಅಂದು ಪ್ರತಿಯೊಬ್ಬನೂ ತನ್ನ ಕೈಗಳು ಮುಂದೆ ಕಳಿಸಿರುವುದನ್ನು (ಕರ್ಮವನ್ನು) ಕಾಣುವನು ಮತ್ತು ಧಿಕ್ಕಾರಿಯು, ‘‘ಅಯ್ಯೋ, ನಾನು ಮಣ್ಣಾಗಿದ್ದರೆ ಚೆನ್ನಾಗಿತ್ತು’’ ಎನ್ನುವನು

Verse 40 — Surah An-Naba 78:40

ಮುಳುಗಿ ಏಳುವವರ ಆಣೆ