Back to Languages

Kannada - Chapter 82 - Al-Infitar

Translation by Abdussalam Puthige — Permalink

Verse 1 — Surah Al-Infitar 82:1

ಆಕಾಶವು ಬಿರಿದು ಬೀಳುವಾಗ

Verse 2 — Surah Al-Infitar 82:2

ಮತ್ತು ನಕ್ಷತ್ರಗಳು ಉದುರುವಾಗ

Verse 3 — Surah Al-Infitar 82:3

ಸಮುದ್ರಗಳು ವಿಲೀನವಾದಾಗ

Verse 4 — Surah Al-Infitar 82:4

ಗೋರಿಗಳನ್ನು ಬಿಚ್ಚಲಾದಾಗ

Verse 5 — Surah Al-Infitar 82:5

ಪ್ರತಿಯೊಬ್ಬನೂ ಅರಿಯುವನು, ತಾನು ಮುಂದೆ ಕಳಿಸಿದ್ದನ್ನು ಮತ್ತು ಹಿಂದೆ ಬಿಟ್ಟು ಬಂದುದನ್ನು

Verse 6 — Surah Al-Infitar 82:6

ಮಾನವನೇ, ಆ ನಿನ್ನ ಉದಾರಿ ಒಡೆಯನ ವಿಷಯದಲ್ಲಿ ನಿನ್ನನ್ನು ಮೋಸಗೊಳಿಸಿದ ವಸ್ತು ಯಾವುದು

Verse 7 — Surah Al-Infitar 82:7

ಅವನೇ ನಿನ್ನನ್ನು ಸೃಷ್ಟಿಸಿದನು (ನಿನ್ನ ಅಂಗಾಂಗಗಳನ್ನು) ಸರಿಪಡಿಸಿದನು, ಸಂತುಲಿತವಾಗಿ ನಿನ್ನನ್ನು ರಚಿಸಿದನು

Verse 8 — Surah Al-Infitar 82:8

ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು

Verse 9 — Surah Al-Infitar 82:9

ಹಾಗಲ್ಲ – ನಿಜವಾಗಿ, ನೀವು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತೀರಿ

Verse 10 — Surah Al-Infitar 82:10

ನಿಮ್ಮ ಮೇಲೆ ಕಾವಲುಗಾರರು ನಿಯುಕ್ತರಾಗಿದ್ದಾರೆ

Verse 11 — Surah Al-Infitar 82:11

(ನಿಮ್ಮ ಕರ್ಮಗಳನ್ನು) ಬರೆದಿಡುವ ಗೌರವಾನ್ವಿತರು

Verse 12 — Surah Al-Infitar 82:12

ನೀವು ಮಾಡುವುದನ್ನೆಲ್ಲಾ ಅವರು ಬಲ್ಲರು

Verse 13 — Surah Al-Infitar 82:13

ಸಜ್ಜನರು ಸ್ವರ್ಗದಲ್ಲಿ ಖಂಡಿತ ಐಶಾರಾಮದಲ್ಲಿರುವರು

Verse 14 — Surah Al-Infitar 82:14

ದುಷ್ಟರು ನರಕಾಗ್ನಿಯಲ್ಲಿರುವರು

Verse 15 — Surah Al-Infitar 82:15

ಪ್ರತಿಫಲದ ದಿನ ಅವರು ಅದರೊಳಗೆ ಪ್ರವೇಶಿಸುವರು

Verse 16 — Surah Al-Infitar 82:16

ಅದರಿಂದ ಅವಿತಿರಲು ಅವರಿಗೆ ಸಾಧ್ಯವಾಗದು

Verse 17 — Surah Al-Infitar 82:17

ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು

Verse 18 — Surah Al-Infitar 82:18

ಹೌದು – ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು

Verse 19 — Surah Al-Infitar 82:19

ಅಂದು ಯಾರಿಂದಲೂ ಯಾರಿಗೂ ಕಿಂಚಿತ್ತೂ ಪ್ರಯೋಜನವಾಗದು. ಅಧಿಕಾರವು ಅಂದು ಸಂಪೂರ್ಣವಾಗಿ ಅಲ್ಲಾಹನದ್ದಾಗಿರುವುದು