Back to LanguagesPrevious ChapterNext Chapter EnglishArabicUrduHindiTamilBengali
Kannada - Chapter 83 - Al-Mutaffifin
Translation by Abdussalam Puthige — Permalink
Verse 1 — Surah Al-Mutaffifin 83:1
ವಿನಾಶವಿದೆ ತೂಕದಲ್ಲಿ ಕೊರತೆ ಮಾಡುವವರಿಗೆ
Verse 2 — Surah Al-Mutaffifin 83:2
ಅವರು ಜನರಿಂದ ಅಳೆದು ಪಡೆಯುವಾಗ ಪೂರ್ಣವಾಗಿ ಪಡೆಯುತ್ತಾರೆ
Verse 3 — Surah Al-Mutaffifin 83:3
ಆದರೆ ಇತರರಿಗೆ ಅಳೆದು ಅಥವಾ ತೂಗಿ ಕೊಡುವಾಗ ಕಡಿಮೆಗೊಳಿಸಿ ಕೊಡುತ್ತಾರೆ
Verse 4 — Surah Al-Mutaffifin 83:4
ಅವರನ್ನು ಮತ್ತೆ ಜೀವಂತ ಗೊಳಿಸಲಾಗುವುದೆಂದು ಅವರಿಗೇನು ತಿಳಿಯದೇ
Verse 5 — Surah Al-Mutaffifin 83:5
ಒಂದು ಮಹಾದಿನ ಅದು ಸಂಭವಿಸುವುದು
Verse 6 — Surah Al-Mutaffifin 83:6
ಅಂದು ಮಾನವರೆಲ್ಲಾ ವಿಶ್ವದೊಡೆಯನ ಮುಂದೆ ನಿಲ್ಲುವರು
Verse 7 — Surah Al-Mutaffifin 83:7
ನಿಮಗೆ ತಿಳಿದಿರಲಿ, ದುಷ್ಟರ ಕರ್ಮಗಳು ‘ಸಿಜ್ಜೀನ್’ನಲ್ಲಿವೆ
Verse 8 — Surah Al-Mutaffifin 83:8
ಸಿಜ್ಜೀನ್ ಅಂದರೆ ಏನೆಂದು ನಿಮಗೇನು ಗೊತ್ತು
Verse 9 — Surah Al-Mutaffifin 83:9
ಅದೊಂದು ಲಿಖಿತ ಗ್ರಂಥ
Verse 10 — Surah Al-Mutaffifin 83:10
ಅಂದು ವಿನಾಶವಿದೆ – ಧಿಕ್ಕಾರಿಗಳಿಗೆ
Verse 11 — Surah Al-Mutaffifin 83:11
ಅವರು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತಾರೆ
Verse 12 — Surah Al-Mutaffifin 83:12
ನಿಜವಾಗಿ, ಎಲ್ಲೆ ಮೀರಿದ ಪಾಪಿ ಮಾತ್ರ ಅದನ್ನು ಧಿಕ್ಕರಿಸುತ್ತಾನೆ
Verse 13 — Surah Al-Mutaffifin 83:13
ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವನು, ಇವೆಲ್ಲ ಗತಕಾಲದ ಕಥೆಗಳು ಎನ್ನುತ್ತಾನೆ
Verse 14 — Surah Al-Mutaffifin 83:14
ಹಾಗಲ್ಲ – ನಿಜವಾಗಿ ಅವರು ಮಾಡಿದ್ದ ಕರ್ಮಗಳು ಅವರ ಮನಸ್ಸುಗಳಿಗೆ ತುಕ್ಕು ಹಿಡಿಸಿವೆ
Verse 15 — Surah Al-Mutaffifin 83:15
ಹಾಗಲ್ಲ – ಅಂದು ಅವರು ತನ್ನ ಒಡೆಯನಿಂದ ಮರೆಯಲ್ಲಿರುವರು
Verse 16 — Surah Al-Mutaffifin 83:16
ತರುವಾಯ ಅವರು ನರಕವನ್ನು ಸೇರುವರು
Verse 17 — Surah Al-Mutaffifin 83:17
ನೀವು ತಿರಸ್ಕರಿಸುತ್ತಿದ್ದುದು ಇದನ್ನೇ ಎಂದು ಅವರೊಡನೆ ಹೇಳಲಾಗುವುದು
Verse 18 — Surah Al-Mutaffifin 83:18
ನಿಮಗೆ ತಿಳಿದಿರಲಿ ಸಜ್ಜನರ ಕರ್ಮ ಪತ್ರವು ‘ಇಲ್ಲಿಯ್ಯೀನ್’ನಲ್ಲಿರುವುದು
Verse 19 — Surah Al-Mutaffifin 83:19
ಇಲ್ಲಿಯ್ಯೀನ್ ಅಂದರೇನೆಂದು ನಿಮಗೇನು ಗೊತ್ತು
Verse 20 — Surah Al-Mutaffifin 83:20
ಅದೊಂದು (ಕರ್ಮಗಳ) ಲಿಖಿತ ಗ್ರಂಥ
Verse 21 — Surah Al-Mutaffifin 83:21
(ಅಲ್ಲಾಹನಿಗೆ) ನಿಕಟರಾಗಿರುವವರು ಅದರ ಬಳಿ ಹಾಜರಿರುವರು
Verse 22 — Surah Al-Mutaffifin 83:22
ಸಜ್ಜನರು ಖಂಡಿತ ಐಶಾರಾಮದಲ್ಲಿರುವರು
Verse 23 — Surah Al-Mutaffifin 83:23
ವೈಭವದ ಆಸನಗಳಲ್ಲಿದ್ದು ದೃಶ್ಯಗಳನ್ನು ಆಸ್ವದಿಸುವರು
Verse 24 — Surah Al-Mutaffifin 83:24
ನೀವು ಅವರ ಮುಖಗಳಲ್ಲಿ ಸುಖದ ಉಲ್ಲಾಸವನ್ನು ಕಾಣುವಿರಿ
Verse 25 — Surah Al-Mutaffifin 83:25
ಅವರಿಗೆ ಮುದ್ರೆ ಹಾಕಿ ಮುಚ್ಚಿಟ್ಟಿದ್ದ ಶುದ್ಧ ಮದಿರೆಯನ್ನು ಕುಡಿಸಲಾಗುವುದು
Verse 26 — Surah Al-Mutaffifin 83:26
ಅದರ ಮುದ್ರೆ ಕಸ್ತೂರಿಯದ್ದಾಗಿರುವುದು, ಸ್ಪರ್ಧಿಸುವವರು ಇದನ್ನು ಪಡೆಯಲು ಸ್ಪರ್ಧಿಸಲಿ
Verse 27 — Surah Al-Mutaffifin 83:27
ಅದರಲ್ಲಿ ತಸ್ನೀಮ್‌ನ ಮಿಶ್ರಣವಿರುವುದು
Verse 28 — Surah Al-Mutaffifin 83:28
ಅದೊಂದು ಚಿಲುಮೆ. ಅಲ್ಲಾಹನ ಆಪ್ತರಾಗಿರುವವರು (ಸ್ವರ್ಗವಾಸಿಗಳು) ಅದನ್ನು ಸೇವಿಸುವರು
Verse 29 — Surah Al-Mutaffifin 83:29
ಅಪರಾಧಿಗಳು (ಇಹಲೋಕದಲ್ಲಿ) ವಿಶ್ವಾಸಿಗಳನ್ನು ಕಂಡು (ಗೇಲಿ ಮಾಡಿ) ನಗುತ್ತಿದ್ದರು
Verse 30 — Surah Al-Mutaffifin 83:30
ಅವರ ಬಳಿಯಿಂದ ಹಾದು ಹೋಗುವಾಗ ತಾತ್ಸಾರದಿಂದ ಕೈ ಸನ್ನೆಗಳನ್ನು ಮಾಡುತ್ತಿದ್ದರು
Verse 31 — Surah Al-Mutaffifin 83:31
ಅವರು ತಮ್ಮ ಮನೆಯವರ ಬಳಿಗೆ ಮರಳುವಾಗ ಹೆಮ್ಮೆಯಿಂದ ಬೀಗುತ್ತಾ ಮರಳುತ್ತಿದ್ದರು
Verse 32 — Surah Al-Mutaffifin 83:32
ಅವರು ಇವರನ್ನು (ವಿಶ್ವಾಸಿಗಳನ್ನು) ಕಂಡಾಗ, ಇವರು ದಾರಿಗೆಟ್ಟವರು ಎನ್ನುತ್ತಿದ್ದರು
Verse 33 — Surah Al-Mutaffifin 83:33
ನಿಜವಾಗಿ ಅವರನ್ನು ಇವರ ಮೇಲ್ವಿಚಾರಣೆಗೇನೂ ಕಳಿಸಲಾಗಿರಲಿಲ್ಲ
Verse 34 — Surah Al-Mutaffifin 83:34
ಆದರೆ ಇಂದು ವಿಶ್ವಾಸಿಗಳು ಧಿಕ್ಕಾರಿಗಳನ್ನು ಕಂಡು ನಗುವರು
Verse 35 — Surah Al-Mutaffifin 83:35
ವೈಭವದ ಆಸನದಲ್ಲಿದ್ದು (ಧಿಕ್ಕಾರಿಗಳ ಗತಿಯನ್ನು) ಕಾಣುತ್ತಿರುವರು
Verse 36 — Surah Al-Mutaffifin 83:36
ಧಿಕ್ಕಾರಿಗಳಿಗೆ ಸಿಕ್ಕಿ ಬಿಟ್ಟಿತೇ, ಅವರು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲ