Back to LanguagesPrevious ChapterNext Chapter EnglishArabicUrduHindiTamilBengali
Kannada - Chapter 84 - Al-Inshiqaq
Translation by Abdussalam Puthige — Permalink
Verse 1 — Surah Al-Inshiqaq 84:1
ಆಕಾಶವು ಸ್ಫೋಟಿಸುವಾಗ
Verse 2 — Surah Al-Inshiqaq 84:2
ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು
Verse 3 — Surah Al-Inshiqaq 84:3
ಭೂಮಿಯನ್ನು ಸಮ ತಟ್ಟಾಗಿಸಲಾಗುವುದು
Verse 4 — Surah Al-Inshiqaq 84:4
ಅದು ತನ್ನೊಳಗಿರುವ ಎಲ್ಲವನ್ನೂ ಹೊರ ಹಾಕಿ ಖಾಲಿಯಾಗಿ ಬಿಡುವುದು
Verse 5 — Surah Al-Inshiqaq 84:5
ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು
Verse 6 — Surah Al-Inshiqaq 84:6
ಮಾನವನೇ, ನೀನು ಕ್ರಮೇಣ ನಿನ್ನೊಡೆಯನ ಕಡೆಗೇ ಹೋಗುತ್ತಿರುವೆ, ನೀನು ಖಂಡಿತ ಅವನನ್ನು ಭೇಟಿಯಾಗುವೆ
Verse 7 — Surah Al-Inshiqaq 84:7
ಯಾರ ಕರ್ಮ ಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಯಿತೋ –
Verse 8 — Surah Al-Inshiqaq 84:8
ಅವನ ವಿಚಾರಣೆಯು ಸುಲಭವಾಗಿ ನಡೆಯುವುದು
Verse 9 — Surah Al-Inshiqaq 84:9
ಮತ್ತು ಅವನು ತನ್ನ ಮನೆಯವರ ಜೊತೆ ಸಂತುಷ್ಟನಾಗಿರುವನು
Verse 10 — Surah Al-Inshiqaq 84:10
ಯಾರಿಗೆ ಅವನ ಗ್ರಂಥವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಯಿತೋ
Verse 11 — Surah Al-Inshiqaq 84:11
ಅವನು ಮರಣಕ್ಕಾಗಿ ಪ್ರಾರ್ಥಿಸುವನು
Verse 12 — Surah Al-Inshiqaq 84:12
ಮತ್ತು ಅವನು ನರಕವನ್ನು ಪ್ರವೇಶಿಸುವನು
Verse 13 — Surah Al-Inshiqaq 84:13
(ಇಹಲೋಕದಲ್ಲಿ) ಅವನು ತನ್ನ ಮನೆಯವರ ಜೊತೆ ಮೈ ಮರೆತಿದ್ದನು
Verse 14 — Surah Al-Inshiqaq 84:14
ತಾನೆಂದೂ (ತನ್ನ ಒಡೆಯನ ಬಳಿಗೆ) ಹೋಗಲಿಕ್ಕೇ ಇಲ್ಲವೆಂದು ಭಾವಿಸಿದ್ದನು
Verse 15 — Surah Al-Inshiqaq 84:15
ಯಾಕಿಲ್ಲ; ಅವನ ಒಡೆಯನಂತೂ ಅವನನ್ನು ನೋಡುತ್ತಲೇ ಇದ್ದನು
Verse 16 — Surah Al-Inshiqaq 84:16
ಅಲ್ಲ; ನಾನು ಸಂಜೆಯ ಕೆಂಬಣ್ಣದ ಆಣೆ ಹಾಕುತ್ತೇನೆ
Verse 17 — Surah Al-Inshiqaq 84:17
ಮತ್ತು ಇರುಳಿನ ಹಾಗೂ ಅದು ಏನನ್ನೆಲ್ಲಾ ಆವರಿಸುತ್ತದೋ ಅವುಗಳ ಆಣೆ
Verse 18 — Surah Al-Inshiqaq 84:18
ಮತ್ತು ಚಂದ್ರನ ಹಾಗೂ ಅದು ಪೂರ್ಣವಾಗುವಾಗಿನಾಣೆ
Verse 19 — Surah Al-Inshiqaq 84:19
ನೀವು ಹಂತ ಹಂತವಾಗಿ ಮೇಲೇರುವಿರಿ
Verse 20 — Surah Al-Inshiqaq 84:20
ಜನರಿಗೇನಾಗಿದೆ, ಅವರೇಕೆ ನಂಬುವುದಿಲ್ಲ
Verse 21 — Surah Al-Inshiqaq 84:21
ಅವರ ಮುಂದೆ ಕುರ್‌ಆನನ್ನು ಓದಲಾದಾಗ ಅವರೇಕೆ ಸಾಷ್ಟಾಂಗ ವೆರಗುವುದಿಲ್ಲ
Verse 22 — Surah Al-Inshiqaq 84:22
ನಿಜವಾಗಿ, ಧಿಕ್ಕಾರಿಗಳು ಇದನ್ನು ಸುಳ್ಳೆನ್ನುತ್ತಾರೆ
Verse 23 — Surah Al-Inshiqaq 84:23
ಅವರು ತಮ್ಮ ಮನಸ್ಸುಗಳಲ್ಲಿ ಅಡಗಿಸಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು
Verse 24 — Surah Al-Inshiqaq 84:24
ಅವರಿಗೆ ಒಂದು ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ
Verse 25 — Surah Al-Inshiqaq 84:25
ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರ ಹೊರತು – ಅವರಿಗೆ ಅಪಾರ ಪ್ರತಿಫಲವಿದೆ