Back to LanguagesPrevious ChapterNext Chapter EnglishArabicUrduHindiTamilBengali
Kannada - Chapter 86 - At-Tariq
Translation by Abdussalam Puthige — Permalink
Verse 1 — Surah At-Tariq 86:1
ಆಕಾಶದಾಣೆ ಮತ್ತು ‘ತ್ವಾರಿಕ್’ ನಾಣೆ
Verse 2 — Surah At-Tariq 86:2
‘ತ್ವಾರಿಕ್’ ಏನೆಂದು ನಿಮಗೇನು ಗೊತ್ತು
Verse 3 — Surah At-Tariq 86:3
ಅದು ಮಿನುಗುವ ತಾರೆ
Verse 4 — Surah At-Tariq 86:4
ಪ್ರತಿಯೊಂದು ಜೀವದ ಮೇಲೂ ಒಬ್ಬ ಮೇಲ್ವಿಚಾರಕನಿರುತ್ತಾನೆ
Verse 5 — Surah At-Tariq 86:5
ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನೊಮ್ಮೆ ನೋಡಲಿ
Verse 6 — Surah At-Tariq 86:6
ಅವರನ್ನು ಜಿಗಿಯುವ ನೀರಿನಿಂದ ಸೃಷ್ಟಿಸಲಾಗಿದೆ
Verse 7 — Surah At-Tariq 86:7
ಅದು ಬೆನ್ನು ಹಾಗೂ ಎದೆಯ ಮಧ್ಯದಿಂದ ಹೊರಡುತ್ತದೆ
Verse 8 — Surah At-Tariq 86:8
ಅವನು ಅವನನ್ನು (ಮನುಷ್ಯನನ್ನು) ಮತ್ತೊಮ್ಮೆ ಸೃಷ್ಟಿಸಲು ಖಂಡಿತ ಸಮರ್ಥನಾಗಿದ್ದಾನೆ
Verse 9 — Surah At-Tariq 86:9
ಮನದೊಳಗಿನ ರಹಸ್ಯಗಳ ಪರಿಶೀಲನೆ (ಅಂತಿಮ ವಿಚಾರಣೆ) ನಡೆಯುವ ದಿನ
Verse 10 — Surah At-Tariq 86:10
ಅಂದು ಅವನ (ಮಾನವನ) ಬಳಿ ಯಾವ ಶಕ್ತಿಯೂ ಇರದು. ಯಾವ ಸಹಾಯಕನೂ ಇರಲಾರನು
Verse 11 — Surah At-Tariq 86:11
ಮಳೆ ಸುರಿಸುವ ಆಕಾಶದಾಣೆ
Verse 12 — Surah At-Tariq 86:12
ಬಿರಿಯುವ ಭೂಮಿಯಾಣೆ
Verse 13 — Surah At-Tariq 86:13
ಇದು ನಿರ್ಣಾಯಕ ಸಂದೇಶ
Verse 14 — Surah At-Tariq 86:14
ಇದು ತಮಾಷೆಯಲ್ಲ
Verse 15 — Surah At-Tariq 86:15
ಅವರು ಸಂಚುಗಳನ್ನು ಹೂಡುತ್ತಿದ್ದಾರೆ
Verse 16 — Surah At-Tariq 86:16
ಮತ್ತು ನಾನೊಂದು ಸಂಚು ಹೂಡುತ್ತಿದ್ದೇನೆ
Verse 17 — Surah At-Tariq 86:17
ನೀವೀಗ ಧಿಕ್ಕಾರಿಗಳಿಗೆ ಕಾಲಾವಕಾಶವನ್ನು ನೀಡಿರಿ. ಕೇವಲ ಸ್ವಲ್ಪ ಕಾಲಾವಕಾಶ