Back to Languages

Kannada - Chapter 87 - Al-Ala

Translation by Abdussalam Puthige — Permalink

Verse 1 — Surah Al-Ala 87:1

(ದೂತರೇ,) ಉನ್ನತನಾಗಿರುವ ನಿಮ್ಮ ಒಡೆಯನ ಪಾವಿತ್ರವನ್ನು ಜಪಿಸಿರಿ

Verse 2 — Surah Al-Ala 87:2

(ಅವನು) ನಿಮ್ಮನ್ನು ಸೃಷ್ಟಿಸಿದವನು ಮತ್ತು ರೂಪಿಸಿದವನು

Verse 3 — Surah Al-Ala 87:3

ವಿಧಿಯನ್ನು ನಿರ್ಣಯಿಸಿದವನು, ಸರಿದಾರಿಯನ್ನು ತೋರಿದವನು

Verse 4 — Surah Al-Ala 87:4

ಮೇವನ್ನು ಬೆಳೆಸಿದವನು

Verse 5 — Surah Al-Ala 87:5

ಕೊನೆಗೆ ಅವನು ಅದನ್ನು ಕಪ್ಪಗಿನ ಕಸವಾಗಿಸಿದನು

Verse 6 — Surah Al-Ala 87:6

ನಾವು ನಿಮಗೆ ಓದಿಸುವೆವು ಮತ್ತೆ ನೀವು ಮರೆಯಲಾರಿರಿ

Verse 7 — Surah Al-Ala 87:7

ಅಲ್ಲಾಹನು ಇಚ್ಛಿಸಿದ್ದರ ಹೊರತು. ಅವನು ಬಹಿರಂಗವಾದುದನ್ನು ಮತ್ತು ಗುಪ್ತವಾದುದನ್ನು ಖಂಡಿತ ಬಲ್ಲನು

Verse 8 — Surah Al-Ala 87:8

ನಾವು ನಿಮ್ಮ ಪಾಲಿಗೆ ಸುಲಭದ ಹಾದಿಯನ್ನು ಸುಗಮ ಗೊಳಿಸುವೆವು

Verse 9 — Surah Al-Ala 87:9

ಉಪದೇಶದಿಂದ ಲಾಭವಿದ್ದಲ್ಲಿ ನೀವು ಉಪದೇಶಿಸಿ

Verse 10 — Surah Al-Ala 87:10

(ದೇವರ) ಭಯ ಉಳ್ಳವನು ಉಪದೇಶ ಸ್ವೀಕರಿಸುವನು

Verse 11 — Surah Al-Ala 87:11

ದುಷ್ಟನು ಅದರಿಂದ ದೂರ ಉಳಿಯುವನು

Verse 12 — Surah Al-Ala 87:12

ಅವನು (ಪರಲೋಕದಲ್ಲಿ) ಮಹಾ ಅಗ್ನಿ ಕುಂಡವನ್ನು ಸೇರುವನು

Verse 13 — Surah Al-Ala 87:13

ಅದರಲ್ಲಿ ಅವನಿಗೆ ಸಾಯಲಿಕ್ಕೂ ಆಗದು ಬದುಕಲಿಕ್ಕೂ ಆಗದು

Verse 14 — Surah Al-Ala 87:14

ಖಂಡಿತ ವಿಜಯಿಯಾದನು – ಶುದ್ಧನಾದವನು

Verse 15 — Surah Al-Ala 87:15

ಮತ್ತು ತನ್ನೊಡೆಯನ ಹೆಸರನ್ನು ಸ್ಮರಿಸಿದವನು ಮತ್ತು ನಮಾಝನ್ನು ಸಲ್ಲಿಸಿದವನು

Verse 16 — Surah Al-Ala 87:16

ಆದರೆ ನೀವು ಇಹಲೋಕದ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ

Verse 17 — Surah Al-Ala 87:17

ನಿಜವಾಗಿ ಪರಲೋಕವು ಉತ್ತಮವಾಗಿದೆ – ಮತ್ತು ಅದು ಸದಾ ಉಳಿದಿರುತ್ತದೆ

Verse 18 — Surah Al-Ala 87:18

ಗತಕಾಲದ ಗ್ರಂಥಗಳಲ್ಲಿ ಇದನ್ನೇ ಹೇಳಲಾಗಿದೆ –

Verse 19 — Surah Al-Ala 87:19

– ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ